ಮಧು ಬಂಗಾರಪ್ಪ

ಮಾನ್ಯ ಶಾಸಕರು, ಕರ್ನಾಟಕ ಸರ್ಕಾರ

ಸಾರ್ವಜನಿಕ ಜೀವನದಲ್ಲಿ ನನಗೆ ದೊರೆತಿರುವ ಪ್ರತಿಯೊಂದು ಜವಾಬ್ದಾರಿಯೂ ಜನರ ಆಶಯಗಳಿಗೆ ಸ್ಪಂದಿಸುವ ಅವಕಾಶ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಜನಪರ ಆಡಳಿತದ ಮೌಲ್ಯಗಳನ್ನು ಮುನ್ನಡೆಸುತ್ತಾ ದುರ್ಬಲ ವರ್ಗಗಳ ಸಬಲೀಕರಣ, ಯುವಜನರ ಪ್ರಗತಿ ಮತ್ತು ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುವುದೇ ನನ್ನ ಧ್ಯೇಯ. ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಮಹಿಳಾ ಸಬಲೀಕರಣ, ರೈತರ ಕಲ್ಯಾಣ ಹಾಗೂ ತಂತ್ರಜ್ಞಾನಾಧಾರಿತ ಪಾರದರ್ಶಕ ಆಡಳಿತದ ಮೂಲಕ ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವುದೇ ನನ್ನ ಗುರಿ.

ಶಿಕ್ಷಣದ ಶಕ್ತಿ, ಭವಿಷ್ಯದ ಭದ್ರತೆ

ಪರಿಪೂರ್ಣ ವ್ಯಕ್ತಿತ್ವ ರೂಪಿಸಲು ಒತ್ತು

ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯಕ್ಕೆ ಶಕ್ತಿ ತುಂಬುವುದು, ಪ್ರತಿಯೊಬ್ಬ ಮಗುವಿಗೂ ಕಲಿಕೆಯ ಸಮಾನ ಅವಕಾಶ ಒದಗಿಸುವುದು, ಗುಣಮಟ್ಟದ ಶಿಕ್ಷಣ ಮತ್ತು ಭವಿಷ್ಯಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಒದಗಿಸುವುದು ನನ್ನ ಶಿಕ್ಷಣದ ದೃಷ್ಟಿಕೋನವಾಗಿದೆ. ತಂತ್ರಜ್ಞಾನ, ಮೌಲ್ಯಾಧಾರಿತ ಶಿಕ್ಷಣ ಹಾಗೂ ಸೃಜನಶೀಲತೆಯ ಮೂಲಕ ಮಕ್ಕಳನ್ನು ಆತ್ಮವಿಶ್ವಾಸಿ, ಜವಾಬ್ದಾರಿಯುತ ಮತ್ತು ಮಾನವೀಯ ಮೌಲ್ಯಗಳಿರುವ ನಾಗರಿಕರನ್ನಾಗಿ ರೂಪಿಸುವುದು ನನ್ನ ಗುರಿ. ಶಿಕ್ಷಣವು ಕೇವಲ ಉದ್ಯೋಗಕ್ಕಾಗಿ ಅಲ್ಲ; ಉತ್ತಮ ಸಮಾಜ, ಬಲಿಷ್ಠ ರಾಷ್ಟ್ರ ಮತ್ತು ಸಮಾನತೆಯ ಭವಿಷ್ಯ ನಿರ್ಮಾಣದ ಶಕ್ತಿಯಾಗಿದೆ. ಕರ್ನಾಟಕದ ಪ್ರತಿಯೊಂದು ಮಗುವಿನ ಕನಸು ನನಸಾಗಬೇಕು ಎಂಬುದು ನನ್ನ ಬದ್ಧತೆ.

ಪರಂಪರೆ ಹಾಗೂ ಸಾಧನೆ

ಬಲಿಷ್ಠ ಸೊರಬ ನಿರ್ಮಾಣ

ಉದಾತ್ತ ಪರಂಪರೆಯ ತಳಹದಿಯಲ್ಲಿ, ಸಮೃದ್ಧ, ಸೌಹಾರ್ದ ಸೊರಬವನ್ನು ನಿರ್ಮಿಸುವುದು ನಮ್ಮ ಗುರಿ. ಈ ಕ್ಷೇತ್ರವ್ನನು ಅಭಿವೃದ್ಧಿ ಮತ್ತು ಮೌಲ ಸೌಕರ್ಯಗಳ ವಿಷಯದಲ್ಲಿ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿ ನಿರ್ಮಿಸುವತ್ತ ನಮ್ಮ ಲಕ್ಷ್ಯ. ಮಾಜಿ ಮುಖ್ಯಮಂತ್ರಿ ದಿವಂಗತ ಶ್ರೀ ಎಸ್.‌ ಬಂಗಾರಪ್ಪರ ಆಶಯದಂತೆ ಸರ್ವರನ್ನೂ ಒಳಗೊಂಡ ಅಭಿವೃದ್ಧಿಯತ್ತ ಹೆಚ್ಚಿನ ಮುತಿವರ್ಜಿ ವಹಿಸಲಾಗುತ್ತಿದೆ. ಬಹಳ ಮುಖ್ಯವಾಗಿ ಕ್ಷೇತ್ರದ ಬೆನ್ನೆಲುಬಾಗಿರುವ ಕೃಷಿಕರ ಹಿತ ರಕ್ಷೆಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ. ದುರ್ಬಲ ವರ್ಗದವರ ಹಿತ ರಕ್ಷಣೆ, ಮಹಿಳಾ ಸಬಲೀಕರಣ, ಯುವಜನರ ಆಶೋತ್ತರಗಳಿಗೆ ಸ್ಪಂದನೆ ನಮ್ಮ ಆಡಳಿತದ ಗುರಿಯಾಗಿದೆ. ಶಿಕ್ಷಣವೇ ಪ್ರಗತಿಗೆ ದಾರಿ ಎಂಬ ಶ್ರೀ ಬಂಗಾರಪ್ಪನವರ ಮಾತಿನಂತೆ, ಕ್ಷೇತ್ರದ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ನಮ್ಮ ನಿರಂತರ ಪ್ರಯತ್ನ ಸಾಗಿದೆ. ಸೊರಬ ಪಟ್ಟಣದ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಿ, ಹಂತ ಹಂತವಾಗಿ ಕ್ರಮ ತೆಗೆದುಕೊಳ್ಳುತ್ತಿದೆ. ಕ್ಷೇತ್ರದ ಪ್ರತಿಯೊಬ್ಬರು ಆತ್ಮಗೌರವದಿಂದ ಮತ್ತು ನೆಮ್ಮದಿಯಿಂದ ಬದುಕುವಂತಾಗಬೇಕೆಂಬುದೇ ನಮ್ಮ ಕನಸು. ಬನ್ನಿ ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಗಳನ್ನಿಡೋಣ.

ಪರಂಪರೆ

ಜನಪರ ನಾಯಕತ್ವದ ಮೌಲ್ಯಗಳ ಮುಂದುವರಿಕೆು

ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಬಂಗಾರಪ್ಪ ಅವರು ಪ್ರತಿಪಾದಿಸಿದ ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಸಬಲೀಕರಣ ಮತ್ತು ಜನರ ಕಲ್ಯಾಣದ ಮೌಲ್ಯಗಳನ್ನು ಮುಂದುವರಿಸುತ್ತಾ, ಹೊಸ ತಲೆಮಾರಿನ ಆಶಯಗಳಿಗೆ ಸ್ಪಂದಿಸುವ ಅಭಿವೃದ್ಧಿ, ಸಮಾನ ಅವಕಾಶಗಳು ಮತ್ತು ಸಾಮಾಜಿಕ ಸೌಹಾರ್ದತೆಯ ಕರ್ನಾಟಕವನ್ನು ನಿರ್ಮಿಸುವುದು ನನ್ನ ಸಂಕಲ್ಪ. ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಸಮಗ್ರ ಪ್ರಗತಿಯ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಉತ್ತಮ ಭವಿಷ್ಯವನ್ನು ರೂಪಿಸುವ ದಿಕ್ಕಿನಲ್ಲಿ ನಿರಂತರವಾಗಿ ಶ್ರಮಿಸುವುದು ನನ್ನ ಬದ್ಧತೆ.

ಜೀವನ ಯಾನ

ಸಿನಿಮಾದಿಂದ ಸಾರ್ವಜನಿಕ ಸೇವೆಯವರೆಗೆ ಮಧು ಬಂಗಾರಪ್ಪರ ಪಯಣ, ನಾಯಕತ್ವ, ಸಾಮಾಜಿಕ ನ್ಯಾಯ ಹಾಗೂ ಕರ್ನಾಟಕದ ಸಮಗ್ರ ಅಭಿವೃದ್ಧಿಯನ್ನು ತಿಳಿಯಿರಿ.

ಇನ್ನಷ್ಟು ಓದಿ

ಶಾಲಾ ಶಿಕ್ಷಣ ಹಾಗೂ ಸಾಕ್ಷರತೆ

ಪಾರದರ್ಶಕತೆ, ವಿದ್ಯಾರ್ಥಿ ಕಲ್ಯಾಣ, ಪೌಷ್ಟಿಕತೆ, ಪರೀಕ್ಷಾ ಸುಧಾರಣೆ, ಉತ್ತಮ ಕಲಿಕಾ ಫಲಿತಾಂಶಗಳು, ಹೊಣೆಗಾರಿಕೆ ಹಾಗೂ ಸಮಾನ ಶಿಕ್ಷಣಾವಕಾಶದ ಪ್ರಮುಖ ಶಿಕ್ಷಣ ಸುಧಾರಣೆಗಳನ್ನು ತಿಳಿಯಿರಿ.

ಇನ್ನಷ್ಟು ಓದಿ

ಎಸ್. ಬಂಗಾರಪ್ಪ ಪರಂಪರೆ

ವಸತಿ, ನೀರಾವರಿ, ಉದ್ಯಮಶೀಲತೆ ಹಾಗೂ ರೈತರ ಕಲ್ಯಾಣದ ಮೂಲಕ ಸಾಮಾಜಿಕ ನ್ಯಾಯ ಮತ್ತು ಗ್ರಾಮೀಣ ಅಭಿವೃದ್ಧಿಗೆ ನೀಡಿದ ಐತಿಹಾಸಿಕ ಕೊಡುಗೆಗಳನ್ನು ತಿಳಿಯಿರಿ.

ಇನ್ನಷ್ಟು ಓದಿ

ಸೊರಬದ ಹೊಸರೂಪ

ಉತ್ತಮ ಶಿಕ್ಷಣ, ಆರೋಗ್ಯ, ಕೃಷಿ, ಮೂಲಸೌಕರ್ಯ, ಉದ್ಯೋಗ, ಪರಂಪರೆ ಸಂರಕ್ಷಣೆ, ಜನಸಬಲೀಕರಣ ಮತ್ತು ಸುಸ್ಥಿರ ಸಮಗ್ರ ಅಭಿವೃದ್ಧಿಯತ್ತ ಬೆಳೆಯುತ್ತಿರುವ ಸೊರಬ.

ಇನ್ನಷ್ಟು ಓದಿ

ಮಾಧ್ಯಮಗಳಿಂದ

Loading latest press updates...

ಜರ್ನಲ್ ಮತ್ತು ಚಿಂತನೆಗಳು

ಇತ್ತೀಚಿನ ಬರಹಗಳು

ಇನ್ನಷ್ಟು ಲೇಖನ ಓದಿ

ʻʻಜ್ಞಾನ ಎಂಬುದು ಕೇವಲ ಶ್ರೀಮಂತರ ಸೊತ್ತಾಗಬಾರದು; ಸಮಾಜದ ಕಟ್ಟಕಡೆಯ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಕ್ಕಾಗ ಮಾತ್ರ ದೇಶದ ನೈಜ ಪ್ರಗತಿ ಸಾಧ್ಯ.ʼʼ

ನೇರ ಸಂಪರ್ಕದ ಚಾನೆಲ್‌ಗಳು

ನಮ್ಮೊಂದಿಗೆ ಸಂಪರ್ಕದಲ್ಲಿರಿ

ಬೆಂಗಳೂರು ಕಚೇರಿ

ಕೊಠಡಿ ಸಂಖ್ಯೆ 262, 262A
2ನೇ ಮಹಡಿ, ವಿಧಾನ ಸೌಧ
ಡಾ. ಬಿ.ಆರ್. ಅಂಬೇಡ್ಕರ್ ವೀಧಿ,
ಬೆಂಗಳೂರು – 560001

ಸೊರಬ ಕಚೇರಿ

ಕುಬಟೂರು ಗ್ರಾಮ, ಅನವಟ್ಟಿ ಹೋಬಳಿ
ಸೊರಬ ತಾಲ್ಲೂಕು, ಶಿವಮೊಗ್ಗ ಜಿಲ್ಲೆ
– 577429