ಮಧು ಬಂಗಾರಪ್ಪ

ಮಾನ್ಯ ಶಾಸಕರು, ಕರ್ನಾಟಕ ಸರ್ಕಾರ

ಸಾರ್ವಜನಿಕ ಜೀವನದಲ್ಲಿ ನನಗೆ ದೊರೆತಿರುವ ಪ್ರತಿಯೊಂದು ಜವಾಬ್ದಾರಿಯೂ ಜನರ ಆಶಯಗಳಿಗೆ ಸ್ಪಂದಿಸುವ ಅವಕಾಶ. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಜನಪರ ಆಡಳಿತದ ಮೌಲ್ಯಗಳನ್ನು ಮುನ್ನಡೆಸುತ್ತಾ ದುರ್ಬಲ ವರ್ಗಗಳ ಸಬಲೀಕರಣ, ಯುವಜನರ ಪ್ರಗತಿ ಮತ್ತು ಕರ್ನಾಟಕದ ಸರ್ವಾಂಗೀಣ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುವುದೇ ನನ್ನ ಧ್ಯೇಯ. ಶಿಕ್ಷಣ, ಆರೋಗ್ಯ, ಕೌಶಲ್ಯ ಅಭಿವೃದ್ಧಿ, ಮಹಿಳಾ ಸಬಲೀಕರಣ, ರೈತರ ಕಲ್ಯಾಣ ಹಾಗೂ ತಂತ್ರಜ್ಞಾನಾಧಾರಿತ ಪಾರದರ್ಶಕ ಆಡಳಿತದ ಮೂಲಕ ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆ ತರುವುದೇ ನನ್ನ ಗುರಿ.

ಶಿಕ್ಷಣದ ಶಕ್ತಿ, ಭವಿಷ್ಯದ ಭದ್ರತೆ

ಪರಿಪೂರ್ಣ ವ್ಯಕ್ತಿತ್ವ ರೂಪಿಸಲು ಒತ್ತು

ಪ್ರತಿ ವಿದ್ಯಾರ್ಥಿಯ ಸಾಮರ್ಥ್ಯಕ್ಕೆ ಶಕ್ತಿ ತುಂಬುವುದು, ಪ್ರತಿಯೊಬ್ಬ ಮಗುವಿಗೂ ಕಲಿಕೆಯ ಸಮಾನ ಅವಕಾಶ ಒದಗಿಸುವುದು, ಗುಣಮಟ್ಟದ ಶಿಕ್ಷಣ ಮತ್ತು ಭವಿಷ್ಯಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಒದಗಿಸುವುದು ನನ್ನ ಶಿಕ್ಷಣದ ದೃಷ್ಟಿಕೋನವಾಗಿದೆ. ತಂತ್ರಜ್ಞಾನ, ಮೌಲ್ಯಾಧಾರಿತ ಶಿಕ್ಷಣ ಹಾಗೂ ಸೃಜನಶೀಲತೆಯ ಮೂಲಕ ಮಕ್ಕಳನ್ನು ಆತ್ಮವಿಶ್ವಾಸಿ, ಜವಾಬ್ದಾರಿಯುತ ಮತ್ತು ಮಾನವೀಯ ಮೌಲ್ಯಗಳಿರುವ ನಾಗರಿಕರನ್ನಾಗಿ ರೂಪಿಸುವುದು ನನ್ನ ಗುರಿ. ಶಿಕ್ಷಣವು ಕೇವಲ ಉದ್ಯೋಗಕ್ಕಾಗಿ ಅಲ್ಲ; ಉತ್ತಮ ಸಮಾಜ, ಬಲಿಷ್ಠ ರಾಷ್ಟ್ರ ಮತ್ತು ಸಮಾನತೆಯ ಭವಿಷ್ಯ ನಿರ್ಮಾಣದ ಶಕ್ತಿಯಾಗಿದೆ. ಕರ್ನಾಟಕದ ಪ್ರತಿಯೊಂದು ಮಗುವಿನ ಕನಸು ನನಸಾಗಬೇಕು ಎಂಬುದು ನನ್ನ ಬದ್ಧತೆ.

ಸಾಮರ್ಥ್ಯದಿಂದ ಸಾಧನೆಯತ್ತ

ಯುವಜನರಿಗೆ ಹೊಸ ಅವಕಾಶಗಳ ಸೃಷ್ಟಿ

ಪ್ರತಿಯೊಬ್ಬರಿಗೂ ಹೊಸ ಅವಕಾಶಗಳ ನಿರ್ಮಿಸುವ ಶಿಕ್ಷಣ, ಉದ್ಯಮಶೀಲತೆ ಮತ್ತು ಸಮುದಾಯ ಅಭಿವೃದ್ಧಿಗೆ ನಿರಂತರ ಬೆಂಬಲ ನೀಡುವ ಮೂಲಕ ಯುವಜನರ ಸಾಮರ್ಥ್ಯವನ್ನು ವೃದ್ಧಿಸುವುದು, ಸ್ವಾವಲಂಬನೆಯನ್ನು ಉತ್ತೇಜಿಸುವುದು ಹಾಗೂ ಹೊಸ ಅವಕಾಶಗಳನ್ನು ಸೃಷ್ಟಿಸುವುದು ನನ್ನ ಪ್ರಮುಖ ಧ್ಯೇಯ. ಕೌಶಲ್ಯ ಅಭಿವೃದ್ಧಿ, ನಾವೀನ್ಯತೆ ಮತ್ತು ಸಾಮಾಜಿಕ ಜವಾಬ್ದಾರಿಯ ಮೌಲ್ಯಗಳ ಕಲಿಸುವ ಮೂಲಕ ಪ್ರತಿಯೊಬ್ಬ ಯುವಕ ಹಾಗೂ ಯುವತಿಗೆ ಆತ್ಮವಿಶ್ವಾಸ, ನಾಯಕತ್ವ ಮತ್ತು ಯಶಸ್ಸಿನ ದಾರಿಯನ್ನು ತೋರಿಸುವುದು, ಸಮಾನ ಅವಕಾಶಗಳ ಆಧಾರದ ಮೇಲೆ ಪ್ರಗತಿಪರ ಸಮ ಸಮಾಜದ ನಿರ್ಮಾಣಕ್ಕೆ ಅಡಿಪಾಯ ಹಾಕುವುದು ನನ್ನ ಕನಸು.

ಪರಂಪರೆ

ಜನಪರ ನಾಯಕತ್ವದ ಮೌಲ್ಯಗಳ ಮುಂದುವರಿಕೆು

ಮಾಜಿ ಮುಖ್ಯಮಂತ್ರಿ ಶ್ರೀ ಎಸ್. ಬಂಗಾರಪ್ಪ ಅವರು ಪ್ರತಿಪಾದಿಸಿದ ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಸಬಲೀಕರಣ ಮತ್ತು ಜನರ ಕಲ್ಯಾಣದ ಮೌಲ್ಯಗಳನ್ನು ಮುಂದುವರಿಸುತ್ತಾ, ಹೊಸ ತಲೆಮಾರಿನ ಆಶಯಗಳಿಗೆ ಸ್ಪಂದಿಸುವ ಅಭಿವೃದ್ಧಿ, ಸಮಾನ ಅವಕಾಶಗಳು ಮತ್ತು ಸಾಮಾಜಿಕ ಸೌಹಾರ್ದತೆಯ ಕರ್ನಾಟಕವನ್ನು ನಿರ್ಮಿಸುವುದು ನನ್ನ ಸಂಕಲ್ಪ. ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿ ಹಾಗೂ ಸಮಗ್ರ ಪ್ರಗತಿಯ ಮೂಲಕ ಪ್ರತಿಯೊಬ್ಬ ನಾಗರಿಕನಿಗೂ ಉತ್ತಮ ಭವಿಷ್ಯವನ್ನು ರೂಪಿಸುವ ದಿಕ್ಕಿನಲ್ಲಿ ನಿರಂತರವಾಗಿ ಶ್ರಮಿಸುವುದು ನನ್ನ ಬದ್ಧತೆ.

Systemic Modernization

The 8 Guarantees for Public School Infrastructure

A legally binding governance manifesto ensuring government institutions directly match private-tier academic and technical standards across all state taluks.

Classroom Teacher Mandate

Eliminating mixed classrooms; ensuring individual faculty allocations up to Class 5.

Universal Bilingual Sections

Rolling out free English-medium options across state public networks.

Early Digital & AI Literacy

Computing fundamentals from Class 1, with basic AI studies entering by Class 3.

Universal Nutrition Support

Comprehensive meals and protein tracks scaled cleanly from pre-primary to Class 12.

Bagair Hukum Land Actions

Securing legal land title deeds (*hakku patra*) for thousands of traditional forest-fringe farming cultivators across hoblis.

Malnad Connectivity Upgrades

Converting rural mud tracks into all-weather asphalt links, backed by robust culverts to endure heavy monsoons.

ಸ್ವಕ್ಷೇತ್ರದತ್ತ ಗಮನ

On-Ground Soraba Constituency Progress

Balancing the specific agricultural parameters and connectivity infrastructure assets inside the Shivamogga district layout.

ಸಾರ್ವಜನಿಕರ ಅಭಿಪ್ರಾಯ

ಜನರ ಧ್ವನಿ

ನಮ್ಮ ಈ ಭಾಗದಲ್ಲಿ ಒಳ್ಳೆಯ ಎಜುಕೇಷನ್‌ ಬೇಕೆಂದರೆ ಜಾಸ್ತಿ ಫೀಸ್‌ ಕಟ್ಟಿ ಖಾಸಗಿ ಶಾಲೆಗಳಲ್ಲಿ ಓದಿಸಬೇಕಿತ್ತು. ಇನ್ನು ಕಂಪ್ಯೂಟರ್‌ ಕಲಿಸಲು ಬೇರೆ ಕಡೆ ಸೇರಿಸಬೇಕಿತ್ತು. ಇದೆಲ್ಲಾ ಸಾಧ್ಯವಾಗದ ಮಾತು ಎಂದೇ ನಾವೆಲ್ಲಾ ಸುಮ್ಮನಾಗುತ್ತಿದ್ದೆವು. ಈಗ ಖರ್ಚಿಲ್ಲದೆ ಒಳ್ಳೆಯ ಶಿಕ್ಷಣ ನೀಡುವ ಮತ್ತು ಕಂಪ್ಯೂಟರ್‌ , ಸೈನ್ಸ್‌ ಲ್ಯಾಬ್‌ ಇರುವ ಕೆಪಿಎಸ್‌ ಶಾಲೆ ಆನವಟ್ಟಿಯಲ್ಲಿ ಆರಂಭವಾಗಿದೆ. ಸಾಗರಕ್ಕೋ, ಶಿವಮೊಗ್ಗಕ್ಕೋ ಹೋಗಬೇಕಾಗಿಲ್ಲ. ಅಲ್ಲದೆ, ಇಂಗ್ಲಿಷ್‌ ಮಾಧ್ಯಮದಲ್ಲಿಯೇ ಕಲಿಸುವುದರಿಂದ ನಾವೆಲ್ಲಾ ಮಕ್ಕಳ ಶಿಕ್ಷಣದ ಬಗ್ಗೆ ತಲೆಬಿಸಿ ಮಾಡಿಕೊಳ್ಳದೇ, ಅವರನ್ನು ಸ್ಕೂಲಿಗೆ ಕಳಿಸಬಹುದಾಗಿದೆ.

ಜೆ. ಸುಮಿತ್ರಮ್ಮ, Rural Parent, Sagar Region

ಮಧು ಬಂಗಾರಪ್ಪ ಅವರಿಗೆ ಸಾಮಾಜಿಕ ತಿಳುವಳಿಕೆ ಮತ್ತು ಜನಪರ ಕಾಳಜಿ ಇದೆ. ಹೀಗಾಗಿಯೇ ಅವರು ಅಧಿಕಾರ ದೊರೆಯುತ್ತಿದ್ದಂತೆಯೇ ಇಲ್ಲಿಯ ಬಹುದೊಡ್ಡ ಸಮಸ್ಯೆಯಾದ ಬಗರ್‌ ಹುಕುಂ ಭೂಮಿಯ ಸಮಸ್ಯೆ ಬಗೆಹರಿಸಲು ಕ್ರಮ ತೆಗೆದುಕೊಂಡರು. ಬಗರ್‌ ಹುಕುಂ ರೈತರಿಗೆಲ್ಲಾ ಹಕ್ಕು ಪತ್ರ ಕೊಡಿಸಿದರು. ಇಲ್ಲದಿದ್ದರೆ, ನಾವೆಲ್ಲಾ ಕೆಲಸ ಹುಡುಕಿಕೊಂಡು ನಗರಗಳಿಗೆ ವಲಸೆ ಹೋಗಬೇಕಾಗಿತ್ತು. ಈಗ ಇಲ್ಲೆ ನಾವೆಲ್ಲಾ ನೆಮ್ಮದಿಯಾಗಿ ಕೃಷಿ ಮಾಡಿಕೊಂಡು ಬದುಕುತ್ತಿದ್ದೇವೆ.

ದರ್ಶನ್ ಆರ್ ಯುವ ರೈತ ಮುಖಂಡ, ಸೊರಬ.

"The recent focus on infrastructure has completely changed our daily commute. Converting mud tracks to all-weather roads means our agricultural produce reaches the markets faster and without damage. It's a massive shift for the local economy."

ರಮೇಶ್ ಗೌಡ Local Farmer, Malnad