ಬಂಗಾರಧಾಮ
ಶ್ರೀಮತಿ ಶಕುಂತಳಾ ಬಂಗಾರಪ್ಪ & ಶ್ರೀ ಸಾರೆಕೊಪ್ಪ ಬಂಗಾರಪ್ಪ ಸ್ಮಾರಕ
ಬಂಗಾರಧಾಮದ ಬಗ್ಗೆ
ರಾಜ್ಯದ ಮಾಜಿ ಮುಖ್ಯಮಂತ್ರಿ, ಜನಪ್ರಿಯ ರಾಜಕಾರಣಿ, ಹಿಂದುಳಿದ ವರ್ಗಗಳ ನೇತಾರ, ಬಡವರ ಬಂಧು ಖ್ಯಾತಿಯ ಎಸ್. ಬಂಗಾರಪ್ಪ ಹಾಗೂ ಅವರ ಪತ್ನಿ ಶಕುಂತಲಾ ಬಂಗಾರಪ್ಪ ಅವರ ಸಮಾಧಿ ಸ್ಥಳ ʻಬಂಗಾರ ಧಾಮʼ. ಈ ಸ್ಮಾರಕವನ್ನು ಅವರ ಪುತ್ರ, ಕರ್ನಾಟಕ ರಾಜ್ಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಶ್ರೀ ಮಧು ಬಂಗಾರಪ್ಪ ಸ್ವಂತ ಖರ್ಚಿನಲ್ಲಿ ನಿರ್ಮಾಣ ಮಾಡಿರುವ ಈ ʻಬಂಗಾರ ಧಾಮʼವನ್ನು ಅವರದ್ದೇ ನೇತೃತ್ವದ ಎಸ್. ಬಂಗಾರಪ್ಪ ಫೌಂಡೇಷನ್ ನಿರ್ವಹಿಸುತ್ತಿದೆ.
ಎಸ್. ಬಂಗಾರಪ್ಪ ಅವರ ಚಿಂತನೆ, ಅಭಿರುಚಿಗೆ ಪೂರಕವಾಗಿ ಒಂದು ಕಾಲು ಎಕರೆ ಪ್ರದೇಶದಲ್ಲಿ ಈ ಸ್ಮಾರಕವನ್ನು ನಿರ್ಮಿಸಲಾಗಿದ್ದು, ಶ್ರೀ ಬಂಗಾರಪ್ಪನವರು ಜೀವನದುದ್ದಕ್ಕೂ ಅನುಸರಿಸಿದ ಆದರ್ಶ, ಆಡಳಿತಾವಧಿಯಲ್ಲಿ ನೀಡಿದ ಕೊಡುಗೆಗಳನ್ನು ಸ್ಮರಿಸುವ ತಾಣವಾಗಿ ರೂಪಿಸಲಾಗಿದೆ. ಗ್ರಾನೈಟ್ ಮತ್ತು ಮಾರ್ಬಲ್ ಕೆತ್ತನೆಯ ಕಲಾಕೃತಿಗಳು ಬಂಗಾರಧಾಮದ ಸೌಂದರ್ಯ ಹೆಚ್ಚಿಸಿದ್ದು, ಧ್ಯಾನ ಮಂದಿರ, ವಾಕಿಂಗ್ ಪಾಥ್, ಹೂವಿನ ತೋಟ, 1,500 ಮಂದಿಗೆ ಆಸನ ವ್ಯವಸ್ಥೆ ಹೊಂದಿರುವ ಆಧುನಿಕ ಬಯಲು ರಂಗಮಂದಿರ ಇಲ್ಲಿದೆ.
ಜನರ ಕಲ್ಯಾಣಕ್ಕಾಗಿಯೇ ಬದುಕಿದ ಮತ್ತು ಮುಂದಿನ ಪೀಳಿಗೆಗೆ ನಿರಂತರ ಪ್ರೇರಣೆಯಾಗಿರುವ ಜನ ನಾಯಕನ ನೆನಪನ್ನು ಹಸಿರಾಗಿಟ್ಟುಕೊಂಡಿರುವ ಬಂಗಾರಧಾಮವು, ಕೃತಜ್ಞತೆ ಮತ್ತು ಗೌರವದ ಸಂಕೇತವಾಗಿ ನಿಂತಿದೆ. ಬಂಗಾರ ಧಾಮಕ್ಕೆ ರಾಜ್ಯ ಸರ್ಕಾರವು ಪ್ರವಾಸಿ ತಾಣವಾಗಿ ಮನ್ನಣೆ ನೀಡಿದೆ.
ಇತ್ತೀಚಿನ ಸುದ್ದಿ ಮತ್ತು ಕಾರ್ಯಕ್ರಮಗಳು
ಶ್ರೀ ಎಸ್. ಬಂಗಾರಪ್ಪ -93
ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಸ್. ಬಂಗಾರಪ್ಪನವರ 93ನೇ ಜನ್ಮದಿನೋತ್ಸವದ ಅಂಗವಾಗಿ, ‘ಎಸ್. ಬಂಗಾರಪ್ಪ ಫೌಂಡೇಶನ್’ ಮತ್ತು ‘ಎಸ್. ಬಂಗಾರಪ್ಪ ವಿಚಾರ ವೇದಿಕೆ’ ಜಂಟಿಯಾಗಿ ‘ಬಂಗಾರ’ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಆಳ್ವಾಸ್ ಫೌಂಡೇಶನ್‌ನ ‘ಆಳ್ವಾಸ್ ಸಾಂಸ್ಕೃತಿಕ ವೈಭವ’ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಿವೆ.
ದಿನಾಂಕ: ಭಾನುವಾರ, 26 ಅಕ್ಟೋಬರ್ 2026
ಸಮಯ: ಸಂಜೆ 5:00 ಗಂಟೆಯಿಂದ
ಸ್ಥಳ: ಬಂಗಾರಧಾಮ, ಸೊರಬ (ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆಯಿಂದ ಪ್ರವಾಸಿ ತಾಣವಾಗಿ ಗುರುತಿಸಲ್ಪಟ್ಟಿದೆ)