ಸೇವೆಯ ಹಾದಿಯಲ್ಲಿ, ನಾಡಿನ ಪ್ರಗತಿಗಾಗಿ ನನ್ನದೊಂದು ಆಶಯ
ನನ್ನ ಬ್ಲಾಗ್‌ಗೆ ನಿಮಗೆ ಆತ್ಮೀಯ ಸ್ವಾಗತ. ನಿರಂತರ ಸಾರ್ವಜನಿಕ ಒಡನಾಟ, ನಾಡಿನ ಏಳಿಗೆಗಾಗಿ ಶ್ರಮಿಸುವುದು ಮತ್ತು ಜನರ ಕನಸುಗಳಿಗೆ ರೆಕ್ಕೆ ಕಟ್ಟುವುದು, ಇದೆಲ್ಲಾ ನನಗೆ ಭಗವಂತ ನೀಡಿದ ಸೌಭಾಗ್ಯ ಎಂದೇ ಭಾವಿಸುತ್ತೇನೆ. 'ಜನಸೇವೆಯೇ ಜನಾರ್ದನ ಸೇವೆ' ಎಂಬ ನಂಬಿಕೆಯೊಂದಿಗೆ ವಿದ್ಯಾರ್ಥಿಗಳು, ಶಿಕ್ಷಕರು, ರೈತರು ಹಾಗೂ ಕಾರ್ಮಿಕರ ಜೊತೆಗಿನ ನನ್ನ ಸಂವಾದಗಳು ಸಮಾಜವನ್ನು ಮತ್ತಷ್ಟು ಆಳವಾಗಿ ಅರ್ಥಮಾಡಿಕೊಳ್ಳಲು ನನಗೆ ನೆರವಾಗಿವೆ. ನನ್ನ ದೃಷ್ಟಿಯಲ್ಲಿ ರಾಜಕೀಯ ಎಂದರೆ ಕೇವಲ ಆಡಳಿತವಲ್ಲ, ಅದು ಹೊಸ ಅವಕಾಶಗಳನ್ನು ಸೃಷ್ಟಿಸಿ, ಬದ್ಧತೆಯಿಂದ ಸಾರ್ವಜನಿಕ ನ್ಯಾಯ ದೊರಕಿಸಿಕೊಡುವ ಒಂದು ಪವಿತ್ರ ವೇದಿಕೆ. ಇದು ಸತತ ಕಲಿಕೆ ಮತ್ತು ಎಲ್ಲರ ಅಭಿಪ್ರಾಯಗಳನ್ನು ಆಲಿಸುತ್ತಾ ಸಾಗುವ ಚಂದದ ಪಯಣ. ಈ ಬ್ಲಾಗ್‌ನಲ್ಲಿ ಶಿಕ್ಷಣ, ಪ್ರಗತಿ ಮತ್ತು ಸಾರ್ವಜನಿಕ ಸೇವೆಯ ಕುರಿತಾದ ನನ್ನ ಚಿಂತನೆ ಹಾಗೂ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದೇನೆ. ಇಲ್ಲಿನ ಬರಹಗಳು ನಮ್ಮೆಲ್ಲರ ನಡುವಿನ ಒಂದು ಅರ್ಥಪೂರ್ಣ ಸಂವಾದಕ್ಕೆ ಮುನ್ನುಡಿ ಬರೆಯಲಿ ಎಂಬುದು ನನ್ನ ಆಶಯ.
ಕನ್ನಡ ನಮ್ಮ ಹೆಮ್ಮೆ, ಶಿಕ್ಷಣ ನಮ್ಮ ಜವಾಬ್ದಾರಿ: ಪರೀಕ್ಷಾ ನಿಯಮಗಳ ಆಚೆಗೆ…
ಶಿಕ್ಷಣದಲ್ಲಿ ಕೆಲವೊಮ್ಮೆ ಒಂದು ಸಣ್ಣ ಬದಲಾವಣೆಯೂ ದೊಡ್ಡ ಸಾರ್ವಜನಿಕ ಚರ್ಚೆಗೆ ಕಾರಣವಾಗುತ್ತದೆ. ಇತ್ತೀಚಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೂರನೇ ಭಾಷೆಗೆ ಅಂಕಗಳ ಬದಲಾಗಿ ಗ್ರೇಡ್ ನೀಡುವ ನಿರ್ಧಾರವೂ ಅಂತಹ ಒಂದು ವಿಷಯವಾಗಿದೆ.
ಡಿಜಿಟಲ್ ಕ್ರಾಂತಿ : ತಂತ್ರಜ್ಞಾನದ ನಡುವೆ ಕರಗಿಹೋಗದಿರಲಿ ಗ್ರಾಮೀಣ ಮಕ್ಕಳ ಭವಿಷ್ಯ
ಕಳೆದ ಕೆಲವು ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನದ ಬಳಕೆ ಅಭೂತಪೂರ್ವವಾಗಿ ಹೆಚ್ಚಾಗಿದೆ. ಆನ್‌ಲೈನ್ ತರಗತಿಗಳು, ಮೊಬೈಲ್ ಆ್ಯಪ್‌ಗಳು, ಡಿಜಿಟಲ್ ಗ್ರಂಥಾಲಯಗಳು, ಕೃತಕ ಬುದ್ಧಿಮತ್ತೆ ಆಧಾರಿತ ಕಲಿಕಾ ವ್ಯವಸ್ಥೆಗಳು, ಇ-ಪುಸ್ತಕಗಳು ಮತ್ತು ವೀಡಿಯೊ ಪಾಠಗಳು ಇಂದು ಶಿಕ್ಷಣದ ಭಾಗವಾಗಿವೆ.
ಡಿಜಿಟಲ್ ಗ್ರಂಥಾಲಯದ ಹೊಸ ಅಧ್ಯಾಯ: ಕಲಿಕೆಯ ಗುಣಮಟ್ಟ ಮುಖ್ಯ
ಒಂದು ಕಾಲದಲ್ಲಿ ಗ್ರಂಥಾಲಯ ಎಂದರೆ ಪುಸ್ತಕಗಳಿಂದ ತುಂಬಿದ ಕಟ್ಟಡ. ಇಂದು ಅದು ವಿದ್ಯಾರ್ಥಿಯ ಕೈಯಲ್ಲಿರುವ ಮೊಬೈಲ್, ಶಾಲೆಯ ಕಂಪ್ಯೂಟರ್ ಅಥವಾ ಡಿಜಿಟಲ್ ಪರದೆಯ ಮೂಲಕ ಜ್ಞಾನದ ಅನಂತ ಲೋಕವನ್ನು ತೆರೆಯುವ ವೇದಿಕೆಯಾಗಿದೆ.
ಪ್ರತಿ ಮಗುವಿಗೂ ಒಬ್ಬ ಶಿಕ್ಷಕರು? ಐಐಟಿ ಧಾರವಾಡ ಜೊತೆಗೆ ಕೃತಕ ಬುದ್ಧಿಮತ್ತೆಯ ಹೊಸ ಶಿಕ್ಷಣ ಪಯಣ
ಶಿಕ್ಷಣ ಕ್ಷೇತ್ರದಲ್ಲಿ ನಾವು ಹಲವು ವರ್ಷಗಳಿಂದ ಒಂದೇ ಸವಾಲನ್ನು ಎದುರಿಸುತ್ತಿದ್ದೇವೆ. ಒಂದೇ ತರಗತಿಯಲ್ಲಿ ಕುಳಿತಿರುವ ಎಲ್ಲ ವಿದ್ಯಾರ್ಥಿಗಳ ಕಲಿಕೆಯ ವೇಗ ಒಂದೇ ಆಗಿರುವುದಿಲ್ಲ.
ಆ್ಯಪ್‌ಗಳು ಬರಿ ಕಣ್ಗಾವಲಲ್ಲ, ಆಡಳಿತದ ಪಾರದರ್ಶಕತೆ: ಶಿಕ್ಷಣ ಇಲಾಖೆಯ ಡಿಜಿಟಲ್ ಹೆಜ್ಜೆ
ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿರುವ ಈ ಕಾಲದಲ್ಲಿ ಒಂದು ಪ್ರಶ್ನೆ ಆಗಾಗ ಕೇಳಿಬರುತ್ತಿದೆ. ಶಾಲೆಗಳಲ್ಲಿ ಡಿಜಿಟಲ್ ವ್ಯವಸ್ಥೆಗಳು ಮತ್ತು ಮುಖ ಗುರುತಿಸುವಿಕೆ ಆಧಾರಿತ ಹಾಜರಾತಿ ವ್ಯವಸ್ಥೆಗಳು ಜವಾಬ್ದಾರಿತನವನ್ನು ಹೆಚ್ಚಿಸುತ್ತವೆಯೇ?
ಶಾಲೆಯಲ್ಲೇ ಕೌಶಲ್ಯ ಶಿಕ್ಷಣ: ಗ್ರಾಮೀಣ ಮಕ್ಕಳ ಬದುಕಿಗೆ ಭರವಸೆಯ ಹೊಸ ದಾರಿ
ಯಾವುದೇ ವಿದ್ಯಾರ್ಥಿ ಶಾಲೆಯನ್ನು ಬಿಡುವುದೇಕೆ? ಈ ಪ್ರಶ್ನೆಗೆ ಒಂದೇ ಕಾರಣ ಇರುವುದಿಲ್ಲ. ಕೆಲವು ಮಕ್ಕಳು ಆರ್ಥಿಕ ಸಮಸ್ಯೆಯಿಂದ ಓದನ್ನು ನಿಲ್ಲಿಸುತ್ತಾರೆ.





